ಸತ್ಯ ಹರಿಶ್ಚಂದ್ರ, 2017ರ ಭಾರತದ ಕನ್ನಡ ಭಾಷೆಯ ಹಾಸ್ಯಮಯ ರೊಮ್ಯಾಂಟಿಕ್ ಚಲನಚಿತ್ರ. ಈ ಚಿತ್ರವನ್ನು ದಯಾಳ್ ಪದ್ಮನಾಭನ್ ಅವರು ಬರೆದು ನಿರ್ದೇಶಿಸಿದ್ದಾರೆ. ಕೆ. ಮಂಜು ಅವರು ತಮ್ಮ "ಕೆ.ಮಂಜು ಸಿನೆಮಾಸ್" ಬ್ಯಾನರ್ ಅಡಿಯಲ್ಲಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಮುಖ್ಯ ಭೂಮಿಕೆಯಲ್ಲಿ ಶರಣ್ , ಸಂಚಿತ ಪಡುಕೋಣೆ ಮತ್ತು ಭಾವನಾ ರಾವ್ ನಟಿಸಿದ್ದಾರೆ. ಅರ್ಜುನ್ ಜನ್ಯರವರು ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ, ಫೈಜಲ್ ಅಲಿರವರು ಚಿತ್ರದ ಛಾಯಾಗ್ರಹಣ ಮಾಡಿದ್ದಾರೆ. 18 ಸೆಪ್ಟೆಂಬರ್ 2016 ರಂದು ಅಧಿಕೃತವಾಗಿ ಚಿತ್ರವನ್ನು ಪ್ರಕಟಿಸಲಾಯಿತು ಮತ್ತು ಮೈಸೂರು, ಮೇಲುಕೋಟೆ ಮತ್ತು ಪೋರ್ಚುಗಲ್ ನಲ್ಲಿ ಚಿತ್ರೀಕರಣ ನಡೆಯಿತು. 20 ಅಕ್ಟೋಬರ್ 2017ರ ದೀಪಾವಳಿ ಹಬ್ಬದಂದು ಚಿತ್ರ ಬಿಡುಗಡೆಯಾಯಿತು ಈ ಚಿತ್ರವು 2013ರ ಪಂಜಾಬಿ ಚಿತ್ರ ಸಿಂಗ್ ಕೌರ್ ನ ರಿಮೇಕ್ ಆಗಿದೆ, ಇದು ಕನ್ನಡಕ್ಕೆ ರಿಮೇಕ್ ಆದ ಮೊದಲ ಪಂಜಾಬಿ ಸಿನಿಮಾ. == ಪಾತ್ರವರ್ಗ == ಸತ್ಯ ಹರಿಶ್ಚಂದ್ರ ಆಗಿ ಶರಣ್ ಸಾನ್ವಿ ಪಾತ್ರದಲ್ಲಿ ಸಂಚಿತ ಪಡುಕೋಣೆ ಜಯಲಕ್ಷ್ಮಿ ಆಗಿ ಭಾವನಾ ರಾವ್ ಚಿಕ್ಕಣ್ಣ ಶರತ್ ಲೋಹಿತಾಶ್ವ ಸೀತಾ ವಿದ್ಯುಲೇಖ ರಾಮನ್ == ಉಲ್ಲೇಖಗಳು ==